ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಈ ಕೆಳಗಿನ ರೈಲುಗಳಿಗೆ ಆರು ತಿಂಗಳ ಕಾಲ ಪ್ರಾಯೋಗಿಕ ಆಧಾರದ ಮೇಲೆ ತಾತ್ಕಾಲಿಕ ನಿಲುಗಡೆಗೆ ಅವಕಾಶ ನೀಡಲಾಗುತ್ತಿದೆ ಎಂದು ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಅನೀಶ್ ಹೆಗಡೆ ತಿಳಿಸಿದ್ದಾರೆ.
ಆ ನಿಲ್ದಾಣಗಳಿಗೆ ಆಗಮಿಸುವ/ನಿರ್ಗಮಿಸುವ ಸಮಯ ಹಾಗೂ ಜಾರಿಗೆ ಬರಲಿರುವ ದಿನಾಂಕದ ವಿವರ ಈ ಕೆಳಗಿನಂತಿರಲಿದೆ.
READ | ಟ್ರಾಫಿಕ್ ನಿಯಮ ಉಲ್ಲಂಘಿಸುವ ಮುನ್ನ ಹುಷಾರ್, ಮನೆ ಬಾಗಿಕಿಗೆ ಬರಲಿದೆ ನೋಟಿಸ್, ತಪ್ಪಿಸಿಕೊಳ್ಳೋ ಚಾನ್ಸೇ ಇಲ್ಲ
1. ರೈಲುಗಳ ಸಂಖ್ಯೆ 16227/16228 ಮೈಸೂರು ಮತ್ತು ತಾಳಗುಪ್ಪ (Mysuru- Talaguppa) ನಿಲ್ದಾಣಗಳ ನಡುವೆ ಸಂಚರಿಸುವ ಡೈಲಿ ಎಕ್ಸ್ಪ್ರೆಸ್ ರೈಲುಗಳಿಗೆ ಅರಸಾಳು (Arasalu) ನಿಲ್ದಾಣದ ಪ್ರಾಯೋಗಿಕ ನಿಲುಗಡೆಯನ್ನು ಆಗಸ್ಟ್ 24 ರಿಂದ ಜಾರಿಗೆ ಬರಲಿದೆ.
• ರೈಲು ಸಂಖ್ಯೆ 16227 ಅರಸಾಳು ನಿಲ್ದಾಣಕ್ಕೆ ಬೆಳಗ್ಗೆ 5:43/ 5:44 ಗಂಟೆಗೆ ಆಗಮಿಸಿ/ ನಿರ್ಗಮಿಸಲಿದೆ.
• ರೈಲು ಸಂಖ್ಯೆ 16228 ಅರಸಾಳು ನಿಲ್ದಾಣಕ್ಕೆ ರಾತ್ರಿ 10:03/10:04 ಗಂಟೆಗೆ ಆಗಮಿಸಿ/ ನಿರ್ಗಮಿಸಲಿದೆ.
2. ರೈಲುಗಳ ಸಂಖ್ಯೆ 16206/16205 ಮೈಸೂರು ಮತ್ತು ತಾಳಗುಪ್ಪ ನಿಲ್ದಾಣಗಳ ನಡುವೆ ಸಂಚರಿಸುವ ಇಂಟರ್ಸಿಟಿ ಡೈಲಿ ಎಕ್ಸ್ಪ್ರೆಸ್ ರೈಲುಗಳಿಗೆ ಅರಸಾಳು ಮತ್ತು ಕುಂಸಿ ನಿಲ್ದಾಣಗಳಲ್ಲಿ ಪ್ರಾಯೋಗಿಕ ನಿಲುಗಡೆಯನ್ನು ಆಗಸ್ಟ್ 24 ರಿಂದ ಜಾರಿಗೆ ಬರಲಿದೆ.
• ರೈಲು ಸಂಖ್ಯೆ 16206 ಕುಂಸಿ ನಿಲ್ದಾಣಕ್ಕೆ ಬೆಳಿಗ್ಗೆ 11:25/11:26 ಗಂಟೆಗೆ ಆಗಮಿಸಿ/ನಿರ್ಗಮಿಸಲಿದೆ. ಇದೇ ರೈಲು ಅರಸಾಳು ನಿಲ್ದಾಣಕ್ಕೆ 11:40/11:41 ಗಂಟೆಗೆ ಆಗಮಿಸಿ/ನಿರ್ಗಮಿಸಲಿದೆ.
• ರೈಲು ಸಂಖ್ಯೆ 16205 ಅರಸಾಳು ನಿಲ್ದಾಣಕ್ಕೆ ಸಂಜೆ 04:00/04:01 ಗಂಟೆಗೆ ಆಗಮಿಸಿ/ನಿರ್ಗಮಿಸಲಿದೆ. ಇದೇ ರೈಲು ಕುಂಸಿ ನಿಲ್ದಾಣಕ್ಕೆ ಸಂಜೆ 04:15/04:16ಗಂಟೆಗೆ ಆಗಮಿಸಿ/ನಿರ್ಗಮಿಸಲಿದೆ.
3. ರೈಲುಗಳ ಸಂಖ್ಯೆ 17319/17320 ಎಸ್.ಎಸ್.ಎಸ್ ಹುಬ್ಬಳ್ಳಿ ಮತ್ತು ಹೈದರಾಬಾದ್ ನಿಲ್ದಾಣಗಳ ನಡುವೆ ಸಂಚರಿಸುವ ಡೈಲಿ ಎಕ್ಸ್ಪ್ರೆಸ್ ರೈಲುಗಳಿಗೆ ಹೊಟಗಿ ನಿಲ್ದಾಣದ ಪ್ರಾಯೋಗಿಕ ನಿಲುಗಡೆಯನ್ನು ಆಗಸ್ಟ್ 23 ರಿಂದ ಜಾರಿಗೆ ಬರಲಿದೆ.
• ರೈಲು ಸಂಖ್ಯೆ 17319 ಹೊಟಗಿ ನಿಲ್ದಾಣಕ್ಕೆ ಬೆಳಗಿನ ಜಾವ 04:20/04:30 ಗಂಟೆಗೆ ಆಗಮಿಸಿ/ ನಿರ್ಗಮಿಸಲಿದೆ.
• ರೈಲು ಸಂಖ್ಯೆ 17320 ಹೊಟಗಿ ನಿಲ್ದಾಣಕ್ಕೆ ರಾತ್ರಿ 10:15/10:25 ಗಂಟೆಗೆ ಆಗಮಿಸಿ/ ನಿರ್ಗಮಿಸಲಿದೆ.
READ | ಭಾರತೀಯ ಲೆಕ್ಕಪತ್ರ ಇಲಾಖೆಯಲ್ಲಿ 1773 ಹುದ್ದೆಗಳ ನೇಮಕಕ್ಕೆ ಅಧಿಸೂಚನೆ, ನೋಟಿಫಿಕೇಶನ್ ನಲ್ಲಿ ಏನಿದೆ?
4. ರೈಲುಗಳ ಸಂಖ್ಯೆ 19667/19668 ಉದಯಪುರ ಸಿಟಿ ಮತ್ತು ಮೈಸೂರು ನಿಲ್ದಾಣಗಳ ನಡುವೆ ಸಂಚರಿಸುವ ಹಮ್ಸಪರ್ ಸಾಪ್ತಾಹಿಕ ಎಕ್ಸ್ಪ್ರೆಸ್ ರೈಲುಗಳಿಗೆ ಕಲ್ಯಾಣ್ ನಿಲ್ದಾಣದ ಪ್ರಾಯೋಗಿಕ ನಿಲುಗಡೆಯನ್ನು ಆಗಸ್ಟ್ 28 ರಿಂದ ಉದಯಪುರ ಸಿಟಿ ಮತ್ತು ಆಗಸ್ಟ್ 24 ರಿಂದ ಮೈಸೂರು ನಿಲ್ದಾಣದಿಂದ ಜಾರಿಗೆ ಬರಲಿದೆ.
• ರೈಲು ಸಂಖ್ಯೆ 19667 ಕಲ್ಯಾಣ್ ನಿಲ್ದಾಣಕ್ಕೆ ಮಧ್ಯಾಹ್ನ 02:02/02:05 ಗಂಟೆಗೆ ಆಗಮಿಸಿ/ ನಿರ್ಗಮಿಸಲಿದೆ.
• ರೈಲು ಸಂಖ್ಯೆ 19668 ಕಲ್ಯಾಣ್ ನಿಲ್ದಾಣಕ್ಕೆ ಬೆಳಿಗ್ಗೆ 10:57/11:00 ಗಂಟೆಗೆ ಆಗಮಿಸಿ/ ನಿರ್ಗಮಿಸಲಿದೆ.
5. ರೈಲುಗಳ ಸಂಖ್ಯೆ 12213/12214 ಯಶವಂತಪುರ ಮತ್ತು ದೆಹಲಿ ಸರಾಯ ರೋಹಿಲ್ಲಾ ದುರಂತೋ ಸಾಪ್ತಾಹಿಕ ಎಕ್ಸ್ಪ್ರೆಸ್ ರೈಲುಗಳಿಗೆ ನಾಗಪುರ ನಿಲ್ದಾಣದ ಪ್ರಾಯೋಗಿಕ ನಿಲುಗಡೆಯನ್ನು ಆಗಸ್ಟ್ 26 ರಿಂದ ಯಶವಂತಪುರ ಮತ್ತು ಆಗಸ್ಟ್ 28 ರಿಂದ ದೆಹಲಿಯ ಸರಾಯ ರೋಹಿಲ್ಲಾ ನಿಲ್ದಾಣಗಳಿಂದ ಜಾರಿಗೆ ಬರಲಿದೆ.
• ರೈಲು ಸಂಖ್ಯೆ 12213 ನಾಗಪುರ ನಿಲ್ದಾಣಕ್ಕೆ ಸಂಜೆ 04:15/04:20 ಗಂಟೆಗೆ ಆಗಮಿಸಿ/ ನಿರ್ಗಮಿಸಲಿದೆ.
• ರೈಲು ಸಂಖ್ಯೆ 12214 ನಾಗಪುರ ನಿಲ್ದಾಣಕ್ಕೆ 01:25/01:30 ಗಂಟೆಗೆ ಆಗಮಿಸಿ/ ನಿರ್ಗಮಿಸಲಿದೆ.