ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಲಷ್ಕರ್ ಮೊಹಲ್ಲಾ(Lashkar mohalla)ದಲ್ಲಿರುವ ಅಲ್ಪಸಂಖ್ಯಾತರ ವಿದ್ಯಾರ್ಥಿನಿಯರ ಹಾಸ್ಟೆಲ್(Minority Ladies hostel) ಗೆ ಶಾಸಕ ಎಸ್.ಎನ್.ಚನ್ನಬಸಪ್ಪ (SN Channabasappa) ಅವರು ಶನಿವಾರ ಬೆಳ್ಳಂಬೆಳಗ್ಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು.
VIDEO REPORT | ನಾನ್ಯಾರು ಅಂತ ಗೊತ್ತಾಯ್ತೇನಮ್ಮ? ಜನ ನಂಗೆ ಚನ್ನಿ ಅಂತ ಕರೀತಾರೆ…
READ | ಕರ್ನಾಟಕ ಸಂಘದ ಪುಸ್ತಕ ಬಹುಮಾನ ಘೋಷಣೆ, ಯಾವೆಲ್ಲ ಪುಸ್ತಕಗಳು ಆಯ್ಕೆಯಾಗಿವೆ? ಇಲ್ಲಿದೆ ಪಟ್ಟಿ
ಹಾಸ್ಟೆಲ್ ನಲ್ಲಿರುವ ವಿದ್ಯಾರ್ಥಿನಿಯರೊಂದಿಗೆ ಮಾತನಾಡಿದ ಅವರು ಕುಂದುಕೊರತೆಗಳ ಬಗ್ಗೆ ಅಹವಾಲು ಸ್ವೀಕರಿಸಿದರು. ಊಟ ಚೆನ್ನಾಗಿದೆಯೇ? ಗುಣಮಟ್ಟದ್ದೇನು ಕಥೆ? ಅಗತ್ಯ ಸೌಲಭ್ಯಗಳನ್ನು ಪೂರೈಸಲಾಗುತ್ತಿದೆಯೇ? ಸಾಮಗ್ರಿಗಳನ್ನು ಇಟ್ಟುಕೊಳ್ಳಲು ನೀಡಿರುವ ಸ್ಥಳ ಸಾಕಾಗುತ್ತದೆಯೇ? ಹೀಗೆ ವಿವಿಧ ಪ್ರಶ್ನೆಗಳನ್ನು ಕೇಳುವ ಮೂಲಕ ವಿದ್ಯಾರ್ಥಿನಿಯರ ಮನದಾಳದ ಮಾತು ಅರಿಯಲು ಯತ್ನಿಸಿದರು.
ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿದರು. ಅಡುಗೆ ಮನೆ, ವಾಸ ಗೃಹ, ಟಾಯ್ಲೆಟ್ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಸ್ಥಳೀಯ ಮಹಾನಗರ ಪಾಲಿಕೆಯ ಸದಸ್ಯರು, ಜಿಲ್ಲಾ ಮತ್ತು ತಾಲೂಕು ಅಲ್ಪಸಂಖ್ಯಾತ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.