ಸುದ್ದಿ ಕಣಜ.ಕಾಂ
ಶಿವಮೊಗ್ಗ: ಇವರಿಗೆ ಮದುವೆಯಾಗಿ ಐದು ವರ್ಷ ಆಗಿತ್ತು. ಮೂವರು ಮುದ್ದಾದ ಮಕ್ಕಳೂ ಇದ್ದಾರೆ. ತುಂಬು ಸಂಸಾರ. ಆದರೆ, ಪತ್ನಿ ಅನೈತಿಕ ಸಂಬAಧ ಹೊಂದಿದ್ದಾಳೆ ಎಂಬ ಶಂಕೆಯ ಮೇಲೆ ಆಕೆಯನ್ನು ಚಾಕುವಿನಿಂದ ಇರಿದು ಪತಿ ಈಗ ಜೈಲು ಪಾಲಾಗಿದ್ದಾನೆ.
ಭಾನುವಾರ ಇಲ್ಲಿನ ಮಲ್ಲಿಕಾರ್ಜುನ ಬಡಾವಣೆಯಲ್ಲಿ ಘಟನೆ ನಡೆದಿದ್ದು, ಬಿ.ಬಿ. ಫಾತಿಮಾ(23) ಎಂಬಾಕೆಯನ್ನೇ ಗಂಡ ಸೈಯದ್ ಪರ್ವೇಜ್(27) ಚಾಕು ಇರಿದು ಕೊಲೆ ಮಾಡಿದ್ದಾನೆ. ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.